ಪಾರದರ್ಶಕತೆ
ಪಾರದರ್ಶಕತೆಯು ನಂಬಿಕೆ ಮತ್ತು ವಿಶ್ವಾಸಾರ್ಹತೆಯ ನಂಬುವ ಪ್ರಮುಖ ಅಂಶವಾಗಿದೆ. Akshaya Patra ಫೌಂಡೇಶನ್ ತನ್ನ ಎಲ್ಲಾ ಚಟುವಟಿಕೆಗಳ ಸಂಪೂರ್ಣ ಪಾರದರ್ಶಕತೆಯಲ್ಲಿ ನಂಬಿಕೆಯನ್ನಿಟ್ಟಿದೆ. ನಾವು ಈ ತತ್ವಗಳಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಹಣಕಾಸು ವರದಿ ಮಾಡುವಿಕೆ ಗುಣಮಟ್ಟ (IFRS (ಐ ಎಫ಼್ ಆರ್ ಎಸ್)) ಅನುಸರಿಸುತ್ತೇವೆ. 2008-09 ರಲ್ಲಿ ಅಳವಡಿಸಿಕೊಂಡ IFRS ವರದಿ ಮಾಡುವಿಕೆಯು ಸಂಸ್ಥೆಯ ಶೇರುದಾರರ ನಡುವೆ ವಿಶ್ವಾಸವನ್ನು ನಿರ್ಮಾಣ ಮಾಡಲು ಗಣನೀಯವಾಗಿ ಕೊಡುಗೆ ನೀಡಿದೆ.
ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆ (ಐಸಿಎಐ) ಹೊರಡಿಸಿದ ಭಾರತೀಯ ಲೆಕ್ಕಪರಿಶೋಧಕ ಗುಣಮಟ್ಟವನ್ನು ಕೂಡ ನಾವು ಅನುಸರಿಸುತ್ತೇವೆ. ಸಂಸ್ಥೆಯು ಪ್ರಸ್ತುತಿಗಳ ಗುಣಮಟ್ಟವನ್ನು ಹೆಚ್ಚಿಸಲು ಅಕೌಂಟಿಂಗ್ ಮತ್ತು ಹಣಕಾಸು ವರದಿ ಮಾಡುವಿಕೆಯ ಹೊಸ ಮಾನದಂಡಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ. ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ, ಸಂಸ್ಥೆಯು ಹಣಕಾಸು ಆಡಿಟ್ಸ್ ಮತ್ತು ಲೆಕ್ಕಪಟ್ಟಿಗಳನ್ನು ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸುತ್ತದೆ ಮತ್ತು ತನ್ನ ಎಲ್ಲಾ ಪಾಲುದಾರರಿಗೆ ಇದು ಲಭ್ಯವಾಗುವಂತೆ ಮಾಡುತ್ತದೆ.
ನಿರಂತರವಾದ ಮತ್ತು ಕಠಿಣವಾದ ಪಾರದರ್ಶಕತೆಯು ಈ ಕೆಳಗಿನ ಪುರಸ್ಕಾರಗಳನ್ನು ಮತ್ತು ಮಾಹಿತಿ ಮಾನ್ಯತೆಗಳು ಪಡೆಯಲು ಕಾರಣವಾಗಿದೆ.
- ನಿರಂತರವಾಗಿ ಐದು ವರ್ಷಗಳವರೆಗೆ "ಹಣಕಾಸು ವರದಿ ಮಾಡುವಿಕೆಯ ಶ್ರೇಷ್ಠತೆಗಾಗಿ" ICAI ಗೋಲ್ಡ್ ಪಾರಿತೋಷಕ ಪ್ರಶಸ್ತಿ, ಇದು ಐಸಿಎಐ ಹಾಲ್ ಆಫ್ ಫೇಮ್‌ಗೆ ಫೌಂಡೇಶನ್ ಗೆ ಪ್ರವೇಶ ದೊರಕುವಂತೆ ಮಾಡಿತು
- ದಕ್ಷಿಣ ಏಷ್ಯನ್ ಫೆಡರೇಷನ್ ಅಕೌಂಟೆಂಟ್ಸ್ (SAFA) ನಿಂದ ಗೋಲ್ಡ್ ಅವಾರ್ಡ್ 2011-12
- ಮೂರು ವರ್ಷಗಳಿಗೆ ಎನ್ ಜಿ ಒ ವರ್ಗದಲ್ಲಿ ಅತ್ಯುತ್ತಮ ವಾರ್ಷಿಕ ವರದಿ ಗಾಗಿ CSO ಪಾರ್ಟ್ನರ್ಸ್ ಪ್ರಶಸ್ತಿ
- ಸತತ ಎರಡು ವರ್ಷಗಳವರೆಗೆ ಲೀಗ್ ಆಫ್ ಅಮೇರಿಕನ್ ಕಮ್ಯುನಿಕೇಷನ್ಸ್ ಪ್ರೊಫೆಷನಲ್ಸ್ (LACP) ವಿಷನ್ ಅವಾರ್ಡ್‌ನಲ್ಲಿ ಗೋಲ್ಡ್ ಪ್ರಶಸ್ತಿ
ಆಡಳಿತ ತತ್ವಶಾಸ್ತ್ರ ಮತ್ತು ಪಾರದರ್ಶಕತೆ ತತ್ವ ಅನುಸರಿಸಿ, ಸಂಸ್ಥೆಯು 2013-14 ರ ಹಣಕಾಸು ವರ್ಷದ ವಾರ್ಷಿಕ ವರದಿಯನ್ನು ಪ್ರಕಟಿಸಿದೆ. 2013-2014ರ ವಾರ್ಷಿಕ ವರದಿಯ ಆನ್ ಲೈನ್ ಆವೃತ್ತಿಯನ್ನು ದಯವಿಟ್ಟು ನೋಡಿ.
The Akshaya Patra Foundation © 2017 Website Designed & Maintenance By Creative Yogi