ಶಾಲೆಗಳ ಅಗಾಧ ಪ್ರತಿಕ್ರಿಯೆ; ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡಿಯಲ್ಲಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಜೊತೆಯಲ್ಲಿ ನಮ್ಮ ಪರೋಪಕಾರಿ ದಾನಿಗಳಿಂದ ವಿವೇಚನಾಯುಕ್ತವಾದ ಬೆಂಬಲದಿಂದ ಭಾರತದಲ್ಲಿ 1,500 ಮಕ್ಕಳ ಒಂದು ಸ್ಥಳದಿಂದ 1.8 ದಶಲಕ್ಷ ಮಕ್ಕಳ 52 ಸ್ಥಳಗಳ ವರೆಗೆ ಒಂಬತ್ತು ರಾಜ್ಯಗಳಲ್ಲಿ ಹರಡಿದೆ. ಈ ಸಂಸ್ಥೆಯು 19 ವರ್ಷಗಳ ಅವಧಿಯಲ್ಲಿ ಐದು ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಹಾರ ಒದಗಿಸುವುದರಿಂದ ಶುರುವಾಗಿ 19,039 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳವರೆಗೂ ಬೆಳೆದಿದೆ.
ಸಾಮಾನ್ಯ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಹೊರತಾಗಿ, Akshaya Patra ಯು ಇತರೆ ಆಹಾರ ಉಪಕ್ರಮಗಳನ್ನು ಕೂಡ ಅಳವಡಿಸಿಕೊಂಡಿದೆ:
ಅಂಗನವಾಡಿ ಆಹಾರ
ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರು ಆಹಾರ ನೀಡುವುದು
ವಿಶೇಷ ಶಾಲೆಗಳಲ್ಲಿ ಆಹಾರ ಒದಗಿಸುವ ಕಾರ್ಯಕ್ರಮಗಳು
ಆರ್ಥಿಕವಾಗಿ ಹಿಂದುಳಿದವರಿಗೆ ರಿಯಾಯಿತಿ ದರದಲ್ಲಿ ಊಟ
ಓಡಿಹೋದ ಮಕ್ಕಳಿಗೆ ಆಹಾರ ನೀಡುವುದು
ವೃದ್ಧಾಲಯಗಳಲ್ಲಿಯೂ ಆಹಾರ ಒದಗಿಸುವ ಕಾರ್ಯಕ್ರಮಗಳು
ನಿರಾಶ್ರಿತ ಆಹಾರ
ವಿಪತ್ತು ಪರಿಹಾರ
ಉಪಕ್ರಮಗಳಲ್ಲದೇ, ಸಂಸ್ಥೆಯ ಇತರ ಸಮಾಜಿಕ ಕಳವಳಿಯ ಕಡೆಗೂ ಕೂಡ ಕೆಲಸ ಮಾಡುತ್ತದೆ:
ಶಾಲೆ ಮುಗಿದ ನಂತರ ಟ್ಯೂಷನ್ ಗಳು
ಜೀವನ ಕೌಶಲ್ಯ ಕಾರ್ಯಕ್ರಮಗಳು
ಸಮುದಾಯ ಆರೋಗ್ಯ ಶಿಬಿರಗಳು
ವಿದ್ಯಾರ್ಥಿವೇತನ ಕಾರ್ಯಕ್ರಮಗಳು
ಆರೋಗ್ಯ ಪರಿಶೀಲನಾ ಶಿಬಿರಗಳು
Akshaya Patra 2020 ರ ವೇಳೆಗೆ 5 ಮಿಲಿಯನ್ ಮಕ್ಕಳಿಗೆ ಆಹಾರವನ್ನು ತಲುಪಿಸುವ ತನ್ನ ಗುರಿಗೆ ಬದ್ಧವಾಗಿದೆ. ಈ ಗುರಿಯನ್ನು ತಲುಪುವುದರಿಂದ ನಮ್ಮ ದೂರ ದೃಷ್ಟಿ "ಭಾರತದ ಯಾವುದೇ ಮಗುವು ಹಸಿವಿನ ಕಾರಣದಿಂದ ಶಿಕ್ಷಣ ವಂಚಿತವಾಗುವ ಹಾಗಿಲ್ಲ" ಎಂಬ ಧ್ಯೇಯವನ್ನು ಸಾಧಿಸಲು ಹತ್ತಿರವಾಗುತ್ತೇವೆ. ನಮ್ಮ ಪಾಲುದಾರರ ನಿರಂತರ ಬೆಂಬಲದಿಂದ, ನಾವು ಭಾರತದಲ್ಲಿ ತರಗತಿಯ ಹಸಿವನ್ನು ತೆಗೆದುಹಾಕುವ ಮಹತ್ವದ ಪಾತ್ರ,ವಹಿಸಲು ಸಾಧ್ಯವಾಗುತ್ತದೆ.