ಆಡಳಿತ

Akshaya Patra ಆಡಳಿತದ ತತ್ವಗಳು ಕೆಲವೊಂದು ಕಾನೂನುಗಳು, ನಿಯಮಗಳು ಮತ್ತು ಉತ್ತಮ ಪರಿಪಾಠಗಳನ್ನು ಸೂಚಿಸುತ್ತದೆ, ಇದು ಸಂಸ್ಥೆಯನ್ನು ಪರಿಣಾಮಕಾರಿಯಾಗಿ ಮತ್ತು ನೈತಿಕವಾಗಿ ಸಕ್ರಿಯಗೊಳಿಸಲು ಮತ್ತು ತನ್ನ ಎಲ್ಲಾ ಪಾಲುದಾರರಿಗೆ ಮೌಲ್ಯವನ್ನು ನಿರ್ಮಿಸಲು ಸಹಾಯಕವಾಗಿರುತ್ತದೆ.

Akshaya Patra ಫೌಂಡೇಷನ್‌ನಲ್ಲಿ, ಉತ್ತಮ ಆಡಳಿತ ಪದ್ಧತಿಗಳನ್ನು ಅಳವಡಿಸಿಕೊಂಡರೆ ಅದು ನಮ್ಮನ್ನು ಬಹುದೂರ ಕರೆದುಕೊಂಡು ಹೋಗುತ್ತದೆ ಎಂಬ ನಂಬಿಕೆಗೆ ಬದ್ಧವಾಗಿರುತ್ತೇವೆ. ಅಲ್ಲದೆ ನಿಜವಾದ ವಿಶ್ವದರ್ಜೆಯ ಲಾಭರಹಿತ ಸಂಸ್ಥೆಯಾಗಲಿ ಎಂಬ ಹಾರೈಕೆ ಕೂಡ ನಮಗಿದೆ, ಆದರೆ ವಿಶ್ವದರ್ಜೆಯ ಒಂದು ಆಡಳಿತ ಮಾದರಿಗೂ ಕೂಡ ಬದ್ಧವಾಗಿರುತ್ತದೆ.

ನಮ್ಮ ಆಡಳಿತ ಪದ್ಧತಿಗಳು ನಮ್ಮ ಮೌಲ್ಯ ವ್ಯವಸ್ಥೆಯಲ್ಲಿ  ಆಳವಾಗಿ ಬೇರುಬಿಟ್ಟ  ವಿಶ್ವಸ್ಥ  ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಪ್ರಮುಖ ತತ್ವಶಾಸ್ತ್ರವು ಈ 4 ಮೂಲ ತತ್ವಗಳ ಮೇಲೆ ನಿಂತಿದೆ:

• ಫೌಂಡೇಶನ್ ಮತ್ತು ಪಾಲುದಾರರಿಗೆ ಮಂಡಳಿಯ ಹೊಣೆಗಾರಿಕೆ
• ಎಲ್ಲಾ ಪಾಲುದಾರರನ್ನು ಸಮನಾಗಿ ನಡೆಸಿಕೊಳ್ಳುವುದು
• ಮಂಡಳಿಯಿಂದ ಕೌಶಲ್ಯಭರಿತ ಮಾರ್ಗದರ್ಶನ ಮತ್ತು ಪರಿಣಾಮಕಾರಿಯಾದ ಮೇಲ್ವಿಚಾರಣೆ
• ಪಾರದರ್ಶಕತೆ ಮತ್ತು ಸಕಾಲಿಕವಾಗಿ ಬಹಿರಂಗಪಡಿಸುವುದು

ಈ ತತ್ವಕ್ಕೆ ಸುಸಂಗತವಾಗಿ, Akshaya Patra ಫೌಂಡೇಶನ್ ನಿರಂತರವಾಗಿ ಅತ್ಯುತ್ತಮ ಆಡಳಿತ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ.

ಯಶಸ್ವಿ ಸಾರ್ವಜನಿಕ - ಖಾಸಗಿ ಸಹಭಾಗಿತ್ವ

ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಸಲಾಗುತ್ತದೆ. ಅವರು ಯಶಸ್ವಿಯಾಗಿ ಅಕ್ಷರ ದಸೊಹ ಯೋಜನೆಯನ್ನು ನಡೆಸಲು ಧಾನ್ಯಗಳನ್ನು ಮತ್ತು ನಗದು ಸಬ್ಸಿಡಿಗಳನ್ನು ಒದಗಿಸುವ ಮೂಲಕ ನಮಗೆ ಬೆಂಬಲವನ್ನು ನೀಡುತ್ತಿದ್ದಾರೆ. ಜೊತೆಗೆ, ಕಾರ್ಪೊರೇಟ್ ಸಂಸ್ಥೆಗಳು ಮತ್ತು ವೈಯಕ್ತಿಕ ದಾನಿಗಳು ತಮ್ಮ ಉದಾರ ಬೆಂಬಲವನ್ನು ಕೂಡ ವಿಸ್ತರಿಸಿದ್ದಾರೆ.

The Best Way to Make a Difference in the Lives of Others