Akshaya Patra ಫೌಂಡೇಶನ್ ಭಾರತಾದ್ಯಂತ 12 ರಾಜ್ಯಗಳಲ್ಲಿ 52 ಅಡುಗೆಕೋಣೆಗಳು ಕಾರ್ಯನಿರ್ವಹಿಸುತ್ತದೆ
ಕೇಂದ್ರೀಕೃತ ಅಡುಗೆಮನೆಗಳು ದೊಡ್ಡ ಅಡುಗೆ ಮನೆಗಳ ಘಟಕವಾಗಿದ್ದು ಸಾಮಾನ್ಯವಾಗಿ 100,000 ಊಟಗಳನ್ನು ಸಿದ್ಧಪಡಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಈ ಅಡುಗೆ ಮನೆಗಳು ಸುತ್ತಮುತ್ತಲಿರುವ ಶಾಲೆಗಳ ಗುಂಪಿಗೆ ಆಹಾರವನ್ನು ಒದಗಿಸುತ್ತವೆ. ಅವು ಸ್ವಯಂಚಾಲಿತವಾಗಿರುವುದರಿಂದ ಅಡಿಗೆ ಮಾಡುವ ಸಂದರ್ಭಗಳಲ್ಲಿ ನೈರ್ಮಲ್ಯತೆಯನ್ನು ಹೊಂದಿರುತ್ತದೆ. ಮತ್ತೊಂದೆಡೆ, ಭೌಗೋಳಿಕ ಭೂಪ್ರದೇಶ ಮತ್ತು ಅನುಚಿತ ರಸ್ತೆ ಸಂಪರ್ಕ ಮುಂತಾದ ಅಂಶಗಳಿಂದ ದೊಡ್ಡ ಮೂಲಸೌಕರ್ಯ ಅಡುಗೆಮನೆಗಳನ್ನು ನಿರ್ಮಾಣಮಾಡಲು ಸಾಧ್ಯವಿಲ್ಲ ಅನ್ನುವ ಸ್ಥಳಗಳಲ್ಲಿ, ವಿಕೇಂದ್ರೀಕೃತ ಅಡುಗೆಮನೆಗಳ ರೂಪದಲ್ಲಿ ಪರಿಹಾರವನ್ನು ರೂಪಿಸಲಾಗಿದೆ. ಈ ಅಡುಗೆಮನೆಗಳನ್ನು Akshaya Patra ಕಿಚನ್ ಪ್ರಕ್ರಿಯೆಯ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನಗಳ ಅಡಿಯಲ್ಲಿ ಮಹಿಳೆಯರ ಸ್ವಸಹಾಯ ಗುಂಪುಗಳು (SHGs) ನಿರ್ವಹಣೆ ಮಾಡುತ್ತವೆ.
ಸಿಕ್ಸ್ ಸಿಗ್ಮಾ ವಿಧಾನಗಳನ್ನು Akshaya Patra ಅಡುಗೆಮನೆಗಳು ಅಳವಡಿಸಿಕೊಂಡಿವೆ
ಕೇಂದ್ರೀಕೃತ ಘಟಕಗಳಲ್ಲಿ ಅಡಿಗೆ ಕೆಲಸವು ಮುಂಜಾನೆ ಆರಂಭವಾಗುತ್ತದೆ. ಎಲ್ಲಾ ಅಡುಗೆಮನೆಗಳಲ್ಲಿ ಸಂಸ್ಥೆಯು ನಡೆಸುತ್ತಿರುವ ನಿಗದಿತ ಮೆನುವನ್ನು ಅನುಸರಿಸಲಾಗುತ್ತದೆ. ಎಲ್ಲಾ ಕೇಂದ್ರೀಕೃತ ಅಡುಗೆಮನೆಗಳು ಕಡಾಯಿಗಳು, ಟ್ರಾಲಿಗಳು, ಅಕ್ಕಿ ಚ್ಯೂಟ್‌ಗಳು, ದಾಲ್ / ಸಾಂಬಾರ್ ಟ್ಯಾಂಕ್, ಕಟಿಂಗ್ ಬೋರ್ಡ್, ಚಾಕುಗಳು ಮತ್ತು ಇದೇ ರೀತಿಯ ಇತರೆ ವಸ್ತುಗಳಿಂದ ಸಜ್ಜುಗೊಂಡಿದ್ದು, ಇವುಗಳನ್ನು ಬಳಕೆ ಮೊದಲು ಸ್ವಚ್ಛಗೊಳಿಸಲಾಗುತ್ತದೆ. ಉತ್ತರ ಭಾರತೀಯ ಅಡುಗೆಕೋಣೆಗಳು ಅಕ್ಕಿ ಕಡಾಯಿ ಮತ್ತು ದಾಲ್ ಕಡಾಯಿ ನಿಂದ ಸಜ್ಜುಗೊಂಡಿವೆ. ಪ್ರತಿ ಅಕ್ಕಿ ಕಡಾಯಿ ಕನಿಷ್ಠ 500 ಲೀಟರ್ ಸಾಮರ್ಥ್ಯವನ್ನು ಹೊಂದಿದೆ; ಮತ್ತು ಪ್ರತಿ ದಾಲ್ ಕಡಾಯಿಗಳು 1,200 ಲೀಟರ್ ನಿಂದ 3,000 ಲೀಟರ್ ಅಡುಗೆ ಸಾಮರ್ಥ್ಯವನ್ನು ಹೊಂದಿದೆ. ರೋಟಿಯು ಉತ್ತರ ಭಾರತೀಯ ಮೆನುವಿನ ಒಂದು ಭಾಗವಾಗಿವಿರುವುದರಿಂದ, ಅಡುಗೆಮನೆಗಳು 6,000 ಕಿಲೋ ಗೋಧಿ ಹಿಟ್ಟಿನಿಂದ 2,00,000 ರೋಟಿಗಳವರೆಗೆ ರೋಲ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರೊಟ್ಟಿ ಮಾಡುವ ಯಂತ್ರಗಳು ಸಜ್ಜುಗೊಂಡಿವೆ.
ದಕ್ಷಿಣ ಭಾರತದ ಅಡುಗೆಕೋಣೆಗಳು ಅಕ್ಕಿ ಕಡಾಯಿ ಮತ್ತು ಸಾಂಬಾರ್ ಕಡಾಯಿಗಳಿಂದ ಸಜ್ಜುಗೊಂಡಿವೆ. ಪ್ರತಿ ಅಕ್ಕಿ ಕಡಾಯಿಯು ಕನಿಷ್ಠ 500 ಲೀಟರ್ ಸಾಮರ್ಥ್ಯವನ್ನು ಹೊಂದಿದೆ; ಪ್ರತಿ ಸಾಂಬಾರ್ ಕಡಾಯಿಯು 1,200 ಲೀಟರ್ ನಿಂದ 3,000 ಲೀಟರ್ ಸಾಂಬಾರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಎಲ್ಲಾ ಪಾತ್ರೆಗಳು ಸ್ಟೇನ್‌ಲೆಸ್ ಸ್ಟೀಲ್ 304 ಆಹಾರ ದರ್ಜೆಯ ವಸ್ತುಗಳಾಗಿವೆ.
ಕಚ್ಚಾ ವಸ್ತುಗಳನ್ನು ಕೊಳ್ಳುವ ಸಮಯದಲ್ಲಿ ಗುಣಮಟ್ಟ ಖಾತರಿ
ಸರಿಯಾದ ಮತ್ತು ಉತ್ತಮ ಕಚ್ಚಾ ವಸ್ತುಗಳನ್ನು ಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು SQMS ಪ್ರಕ್ರಿಯೆಯು ಸರಬರಾಜುದಾರರ ಆಯ್ಕೆ, ಸರಬರಾಜುದಾರರ ಅರ್ಹತೆ, ಸರಬರಾಜುದಾರರ ರೇಟಿಂಗ್ ಇತ್ಯಾದಿ ನಂತಹ ಉಪ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ನಮ್ಮ ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಯು, ನಮ್ಮ ಎಲ್ಲಾ ಕಚ್ಚಾ ವಸ್ತುಗಳ ನಿರ್ದಿಷ್ಟತೆಗೆ ಅಂದರೆ ಅದನ್ನು ಆಹಾರ ಸುರಕ್ಷತೆ ಗುಣಮಟ್ಟ ಕಾಯ್ದೆ 2006 (FSSA) ಸಮಾನವಾಗಿ ತೆಗೆದುಕೊಂಡ ಮತ್ತು ಅಳವಡಿಸಿಕೊಂಡಂತೆ ಪೂರೈಸಬೇಕಾದ ಎಲ್ಲಾ ಅಗತ್ಯತೆಗಳ ಅನುಸಾರವಾಗಿ ಗುಣಮಟ್ಟ ತಪಾಸಣೆಯ ನಂತರ ಒಪ್ಪಿಕೊಳ್ಳಲಾಗುತ್ತದೆ ಎಂಬುದನ್ನು ಖಾತ್ರಿಪಡಿಸುತ್ತದೆ.
ಸಂಗ್ರಹಣೆ, ನಿರ್ವಹಣೆ ಕಚ್ಚಾ ವಸ್ತುಗಳ ಸಂರಕ್ಷಣೆ
ತಾಜಾ ತರಕಾರಿಗಳನ್ನು ಪ್ರತಿದಿನವು ಖರೀದಿಸಲಾಗುತ್ತದೆ. ಖರೀದಿಯ ನಂತರ, ಉತ್ತಮ ಗುಣಮಟ್ಟವನ್ನು ಉಳಿಸಿಕೊಳ್ಳಲು ತರಕಾರಿಗಳನ್ನು ಬೇರ್ಪಡಿಸಲಾಗುತ್ತದೆ. ಎಲ್ಲಾ ತರಕಾರಿಗಳನ್ನು ಕುಡಿಯುವ ನೀರಿನಲ್ಲಿ ಸ್ವಚ್ಛಗೊಳಿಸಿ ಮತ್ತು ಕತ್ತರಿಸುವ ಮೊದಲು ನಿರ್ಮಲಗೊಳಿಸಲಾಗುತ್ತದೆ. ಅಡಿಗೆ ಮಾಡಲು ಸಿದ್ಧವಿರುವ ತರಕಾರಿಗಳ ತಾಜಾತನವನ್ನು ಉಳಿಸಿಕೊಳ್ಳಲು ಕೋಲ್ಡ್ ಸ್ಟೋರೇಜ್ ನಲ್ಲಿ ಇಡಲಾಗುತ್ತದೆ. ಅಕ್ಕಿಯನ್ನು ಭಾರತೀಯ ಆಹಾರ ನಿಗಮವು (ಎಫ಼್ ಸಿ ಐ) ಪೂರೈಕೆ ಮಾಡುತ್ತದೆ. ಅಡಿಗೆ ಪ್ರಕ್ರಿಯೆಯ ಮೊದಲು, ಅಕ್ಕಿಯನ್ನು ಯಂತ್ರಗಳ ಮೂಲಕ ಸ್ವಚ್ಛಗೊಳಿ ಮತ್ತು ಸಂಪೂರ್ಣವಾಗಿ ತೊಳೆಯಲಾಗುತ್ತದೆ. ಎಲ್ಲಾ ಕಚ್ಚಾ ವಸ್ತುಗಳ ತಾಜಾತನವನ್ನು ಖಾತ್ರಿಗೊಳಿಸಲು, ತಯಾರಿಗಾಗಿ ಕಚ್ಚಾ ವಸ್ತುಗಳನ್ನು ಒದಗಿಸುವಾಗಎಲ್ಲಾ ಅಡುಗೆಕೋಣೆಗಳು FIFO (ಮೊದಲ ಬಂದದ್ದು ಮೊದಲು ಹೋಗಬೇಕು) ಮತ್ತು FEFO (ಮೊದಲ ಮುಗಿಯುವುದು ಮೊದಲು ಬಳಸಬೇಕು) ಎಂಬ ವಿಧಾನಗಳನ್ನು ಅನುಸರಿಸುತ್ತೇವೆ.
ಹಾಗೆ ಮಾಡುವ ಮೂಲಕ, ಅಡುಗೆಮನೆಗಳಲ್ಲಿ ಕಚ್ಚಾ ವಸ್ತುಗಳನ್ನು ಸರಿಯಾಗಿ ಗುರುತಿಸಲು, ಶೇಖರಿಸಲು ಮತ್ತು ಬಳಸಲು ಸಾಧ್ಯವಾಗುತ್ತದೆ.
ಅಡಿಗೆ ಮಾಡುವ ಸಮಯದಲ್ಲಿ ಗುಣಮಟ್ಟ ಮತ್ತು ಸುರಕ್ಷತೆ
Akshaya Patra ಎಲ್ಲಾ ಅಡುಗೆಮನೆಗಳು ಮಧ್ಯಾಹ್ನ ಬಿಸಿ ಊಟವನ್ನು ತಯಾರಿಸುವಲ್ಲಿ ಒಂದು ನಿಗದಿತ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಈ ಪ್ರಕ್ರಿಯೆಯನ್ನು ತಯಾರಿಸಿದ ಊಟದ ನೈರ್ಮಲ್ಯತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಹಾಗೂ ಆಹಾರ ಸುರಕ್ಷತೆ ಗುಣಮಟ್ಟವನ್ನು ಪಡೆಯಲು ಪಟ್ಟಿಮಾಡಲಾಗುತ್ತದೆ. ಎಲ್ಲಾ ಅಡುಗೆ ಉಪಕರಣಗಳಾದ ಕಡಾಯಿ, ಟ್ರಾಲಿಗಳು, ಅಕ್ಕಿ ಚ್ಯೂಟ್‌ಗಳು, ಸಾಂಬಾರ್ / ದಾಲ್ ಟ್ಯಾಂಕ್ ಗಳು, ಕಟ್ಟಿಂಗ್ ಬೋರ್ಡ್ ಗಳು, ಚಾಕುಗಳು ಇತ್ಯಾದಿಗಳನ್ನು ಅಡಿಗೆ ಪ್ರಕ್ರಿಯೆ ಆರಂಭವಾಗುವ ಮೊದಲು ಸ್ಟೀಮ್ ಬಳಸಿ ಕ್ರಿಮಿಶುದ್ಧೀಕರಿಸಲಾಗುತ್ತದೆ. ಅಡಿಗೆಮನೆಗಳಲ್ಲಿ ಬಳಸಲಾಗುವ ಪಾತ್ರೆಗಳು 304 ದರ್ಜೆಯ ಸ್ಟೇನ್ಲೆಸ್ ಸ್ಟೀಲಿನವುಗಳಾಗಿದ್ದು ಮತ್ತು ಆಹಾರ ತಯಾರಿಸಲು ಮತ್ತು ನಿರ್ವಹಣೆ ಅತ್ಯುತ್ತಮವಾಗಿದೆ.
ವಿಕೇಂದ್ರೀಕೃತ ಅಡುಗೆ ಘಟಕಗಳಲ್ಲಿ ಅಡಿಗೆಗೆ ಅಗತ್ಯವಿರುವ ಉಪಕರಣಗಳು ಅಂದರೆ ಚಪಾತಿ ಪ್ಯಾನ್‌ಗಳು, ಅಕ್ಕಿ ಬೇಯಿಸಲು ಪಾತ್ರೆ ಮತ್ತು ಬೇಳೆ ಬೇಯಿಸಲು ಪಾತ್ರೆ ಹಾಗೂ ತಯಾರಿಸಿದ ಅಡುಗೆಯನ್ನು ಶಾಲೆಗಳಿಗೆ ಮಧ್ಯಾಹ್ನದ ಬಿಸಿ ಊಟವನ್ನು ಸಾಗಿಸಲು ಅಗತ್ಯವಾಗಿರುವ ಪಾತ್ರೆಗಳು ಇರುತ್ತದೆ. ನೈರ್ಮಲ್ಯ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ಅಡಿಗೆ ಸಿಬ್ಬಂದಿ ನಿಯಮಿತವಾಗಿ ವೈಯಕ್ತಿಕ ನೈರ್ಮಲ್ಯ ಮತ್ತು ಆಹಾರ ಸುರಕ್ಷತೆ ತರಬೇತಿಯನ್ನು ಒದಗಿಸಲಾಗುತ್ತದೆ.
ಎಲ್ಲಾ ಅಡುಗೆಮನೆಗಳಲ್ಲಿ ತರಬೇತಿ ಪಡೆದ ಅಡುಗೆಯವರು ಹಾಗೂ ಅದರ ತಯಾರಿಕೆಯನ್ನು ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪ್ರೊಡಕ್ಷನ್ ಸೂಪರ್ ವೈಸರ್ ಇರುತ್ತಾರೆ. ಆಹಾರದ ಸರಿಯಾದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅಡುಗೆ ತಾಪಮಾನದಂತಹ ನಿರ್ಣಾಯಕ ನಿಯಂತ್ರಣ ಅಂಶಗಳನ್ನು (CCP ಗಳು) ಪರೀಕ್ಷಿಸಲಾಗುತ್ತದೆ ಮತ್ತು ನಿಯಮಿತ ಅಂತರಗಳಲ್ಲಿ ದಾಖಲಿಸಲಾಗುತ್ತದೆ.
ಆಹಾರ ಗುಣಮಟ್ಟ ಕಾಯ್ದುಕೊಳ್ಳಲು, ಪ್ರತಿ ಅಡುಗೆಮನೆಯಲ್ಲಿ ಗುಣಮಟ್ಟ ಪರಿಶೀಲನಾ ಅಧಿಕಾರಿಗಳು ಗುಣಮಟ್ಟವನ್ನು ಪರೀಕ್ಷಿಸುತ್ತಾರೆ.
ಆಹಾರ ಪ್ಯಾಕಿಂಗ್ ಮತ್ತು ಸಾಗಣೆ
ಬೇಯಿಸಿದ ಆಹಾರವನ್ನು ಸ್ಟೀಮ್ ಸ್ಟೆರಲೈಜ್ಡ್ ಪಾತ್ರೆಗಳಲ್ಲಿ ತುಂಬಲಾಗುತ್ತದೆ. ನಾವು ಸ್ಟೇನ್ ಲೆಸ್ ಸ್ಟೀಲ್ 304 ಗ್ರೇಡ್‌ನ ಪಾತ್ರೆಗಳನ್ನು ಹೊಂದಿದ ಸಾರಿಗೆ ವಾಹನಗಳನ್ನು ಬಳಸುತ್ತೇವೆ ಮತ್ತು ಈ ವಾಹನಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಕಸ್ಟಮೈಸ್ ಮಾಡಲಾಗಿದೆ. ಈ ವಾಹನಗಳಿಗೆ ಆಹಾರವನ್ನು ತುಂಬುವ ಮೊದಲು ಸ್ಟೀಮ್ ಸ್ಟೆರಲೈಸ್ಡ್ ಮಾಡಲಾಗಿರುತ್ತದೆ. ಈ ವಾಹನಗಳು ಮಕ್ಕಳಿಗೆ ಆಹಾರವನ್ನು ಬಡಿಸುವ ತನಕ ಬೇಯಿಸಿದ ಊಟದ ತಾಜಾತನವನ್ನು ಹಾಗೆ ಇರಿಸಿಕೊಳ್ಳಲು ತಾಪಮಾನ ನಷ್ಟ ಮಾಡಲು ಪಫ್ ಮಾಡಿರುವ ಹೊರಕವಚವನ್ನು ಮತ್ತು ಪಾತ್ರೆಗಳನ್ನು ನೇರವಾಗಿ ಹಿಡಿದಿಟ್ಟುಕೊಳ್ಳಲು ಜೇನುಗೂಡು ರಚನೆಯನ್ನು ಬಳಸಲಾಗುತ್ತದೆ.
ವಿತರಣೆ
ದಾರಿಯನ್ನು ಗಮನದಲ್ಲಿರಿಸಿಕೊಳ್ಳಲು ಲಾಜಿಸ್ಟಿಕ್ ನಿಗದಿಪಡಿಸಿ ಮತ್ತು ಸಮಯಕ್ಕೆ ಸರಿಯಾಗಿ ಹಾಗೂ ಸುರಕ್ಷಿತ ವಿತರಣೆಗಾಗಿ ವಾಹನಗಳ ಮೇಲೆ ನಿಗಾ ಇಡಲು ಜಿಪಿಆರ್‌ಎಸ್ ವಿಧಾನಗಳನ್ನು ಕ್ರಮೇಣವಾಗಿ ಅಳವಡಿಸಿ ಎಲ್ಲಾ ಅಡುಗೆಕೋಣೆಗಳಿಗೆ ಕಾರ್ಯಗತಗೊಳಿಸಲಾಗುತ್ತಿದೆ.
ವಿತರಣೆ ಪ್ರಕ್ರಿಯೆಯ ನಂತರ
ಆಹಾರದ ಗುಣಮಟ್ಟವನ್ನು ಸತತವಾಗಿ ಕಾಯ್ದುಕೊಳ್ಳಲು, ಆಹಾರವನ್ನು ವಿತರಣೆ ಮಾಡುವಾಗ ನಾವು ಪ್ರತಿದಿನವು ಶಾಲೆಗಳಿಂದ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ. ಅಡಿಗೆಮನೆಗಳಲ್ಲಿರುವ ಗುಣಮಟ್ಟ ಪರಿಶೀಲನ ಅಧಿಕಾರಿಗಳು ಪ್ರತಿಕ್ರಿಯೆಯನ್ನು ವಿಮರ್ಶಿಸುತ್ತಾರೆ ಮತ್ತು ಆಹಾರ ಗುಣಮಟ್ಟ ಮತ್ತು ವಿತರಣಾ ಸುಧಾರಿಸಲು ಸೂಕ್ತವಾಗಿ ಸರಿಪಡಿಸುವ ಅಥವಾ ಸುಧಾರಣ ಕ್ರಿಯೆಗಳನ್ನು ಪ್ರೇರೇಪಿಸುತ್ತಾರೆ. ನಾವು ಮಧ್ಯಾಹ್ನದ ಬಿಸಿ ಊಟವನ್ನು ನೀಡುವ ಸಮಯದಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು ನಿಯಮಿತವಾಗಿ ಎಲ್ಲಾ ಶಾಲೆಗಳಲ್ಲಿ 'ಮಾಡಬೇಕಾದ ಮತ್ತು ಮಾಡಬಾರದ' ಕರಪತ್ರಗಳು ಹಂಚಲಾಗುತ್ತದೆ.
ಪ್ರಕ್ರಿಯೆಗಳು ಹಾಗೂ ವ್ಯವಸ್ಥೆಗಳು ಮತ್ತು ಅವುಗಳ ಕಾರ್ಯನಿರ್ವಹಣೆಯ ಮೇಲ್ವಿಚಾರಣೆಯಲ್ಲಿ ಆಡಿಟ್ ಹಾಗೂ ರಿವ್ಯೂ ವಿಧಾನವು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ನಾವು ಉತ್ತಮ ಉತ್ಪಾದನೆ ಪ್ರಕ್ರಿಯೆ (ಜಿಎಂಪಿ) ಮಾಸಿಕ ಲೆಕ್ಕ ಪರಿಶೋಧನೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಮೇಲೆ ಅನಿರೀಕ್ಷಿತ ಪರಿಶೋಧನೆ ಮಾಡುವಂತಹ ಕೆಲವು ಪ್ರಕ್ರಿಯೆಗಳನ್ನು ಜಾರಿಗೊಳಿಸಿದ್ದೇವೆ. ಗುಣಮಟ್ಟ ಮೆಟ್ರಿಕ್ಸ್ ಕಾರ್ಯನಿರ್ವಹಣೆಯನ್ನು ಮಾಸಿಕ ಆಧಾರದ ಮೇಲೆ ಪುನರ್ಪರಿಶೀಲನೆ ಮಾಡಲಾಗುತ್ತದೆ. ನಾವು ಆಹಾರ ವಿತರಣಾ ಸಮಯದಲ್ಲಿ ತೆಗೆದುಕೊಳ್ಳುವ ದಿನ ದಿನದ ಅಭಿಪ್ರಾಯವನ್ನು ಹೊರತುಪಡಿಸಿ ನಿಯಮಿತ ಅಂತರಗಳಲ್ಲಿ ಗುಣಮಟ್ಟ ಸಿಬ್ಬಂದಿಯವರು ವಿವರವಾದ ಗ್ರಾಹಕ ತೃಪ್ತಿ ಸಮೀಕ್ಷೆಗಳನ್ನು ಮಾಡುತ್ತಾರೆ. ಪ್ರಮಾಣಿತ ಅಡಿಗೆಮನೆಗಳಲ್ಲಿ, ಐಎಸ್ಒ (ISO) 22000 ಆಂತರಿಕ ಲೆಕ್ಕ ಪರಿಶೋಧನೆ ಗುಣಮಟ್ಟ ಹಾಗೂ ಎಫ್ಎಸ್ಎಮ್ಎಸ್ ವ್ಯವಸ್ಥಾಪಕರ ನೇತೃತ್ವದಲ್ಲಿ ಅರ್ಹ ಆಂತರಿಕ ಲೆಕ್ಕಪರಿಶೋಧಕರಿಂದ ವರ್ಷಕ್ಕೆ ಎರಡು ಪರಿಶೋಧನೆ ಮಾಡಲಾಗುತ್ತದೆ. ಎಲ್ಲಾ ಸಂಬಂಧಿತ ಪರಿಶೋಧಕರಿಂದ ಡೇಟಾವನ್ನು ಪರಿಶೀಲಿಸಿ ಸೂಕ್ತವಾದ ಸುಧಾರಣೆಗೆ ಅಥವಾ ಸರಿಪಡಿಸುವ ಕ್ರಿಯೆಗಳನ್ನು ತೆಗೆದುಕೊಳ್ಳಲಾಗುವುದು. ಎಲ್ಲಾ ಕ್ರಮಗಳು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನವಾಗುವ ತನಕ ಪರೀಕ್ಷಿಸಲಾಗುತ್ತದೆ.
ನಿರಂತರವಾದ ಸುಧಾರಣೆ ವಿಧಾನಗಳು
ನಾವು ನೀಡುತ್ತಿರುವ ಮಧ್ಯಾಹ್ನದ ಬಿಸಿ ಊಟದ ಗುಣಮಟ್ಟವನ್ನು ಉಳಿಸಿಕೊಳ್ಳುವ ಮೂಲಕ ನಮ್ಮ ಸೇವೆಗಳನ್ನು ನಿರ್ವಹಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು ಅದರ ಸತತ ಸುಧಾರಣೆಯ ಅಗತ್ಯವಿದೆ. ವಿವಿಧ ಪ್ರಕ್ರಿಯೆಗಳನ್ನು ನಾವು ಸತತವಾಗಿ ಸುಧಾರಣೆಯನ್ನು ಮಾಡಬೇಕು ಇದರಿಂದ ಪ್ರತಿ ಸುಧಾರಣೆಯ ಹಂತವು ಗುರಿಯ ಮುಂದಿನ ಹಂತವನ್ನು ತಲುಪಿಸುತ್ತದೆ. ನಾವು ಸಮಗ್ರ ಮಾರ್ಗವನ್ನು ಅಳವಡಿಸಿಕೊಂಡು 'ಅಕ್ಷಯ ಪ್ರಗತಿ' ಎಂಬ ಯೋಜನೆಯನ್ನು ವಿನ್ಯಾಸಗೊಳಿಸಿದ್ದೇವೆ. ಕಾರ್ಯಕ್ರಮದ ಒಂದು ಭಾಗವಾಗಿ, ಎಲ್ಲಾ ಸದಸ್ಯರು ಇದರ ಭಾಗವಾಗಿರಬೇಕೆಂದು ಖಚಿತಪಡಿಸಿಕೊಳ್ಳಲು ನಾವು ಕೈಜೆನ್, CI ಯೋಜನೆಗಳು ಮತ್ತು ಸಿಕ್ಸ್ ಸಿಗ್ಮಾ ವಿಧಾನಗಳನ್ನು ಕಾರ್ಯರೂಪಕ್ಕೆ ತಂದು ಅದನ್ನು ಜಾರಿಗೊಳಿಸುತ್ತಿದ್ದೇವೆ.
ತರಬೇತಿ ಅನ್ನುವುದು ನಿರಂತರವಾದ ಸುಧಾರಣೆ ಕಾರ್ಯಕ್ರಮದ ಒಂದು ಅವಿಭಾಜ್ಯ ಭಾಗವಾಗಿದೆ. 2012-13 ನೇ ಆರ್ಥಿಕ ಸಾಲಿನ 5S, ಜಿಎಂಪಿ, ಲೀನ್ ಮತ್ತು ಕೈಜೆನ್ ಮತ್ತು ಐಎಸ್ಒ (ISO) 22000 ಜಾಗೃತಿ ಕುರಿತಾಗಿ ತರಬೇತಿಯನ್ನು ಮಾಡಲಾಗಿತ್ತು, ಮತ್ತು ಇದರಲ್ಲಿ 6,000 ಕ್ಕು ಹೆಚ್ಚು ಘಂಟೆಗಳ ಎಲ್ಲಾ ಸ್ಥಳಗಳಲ್ಲಿನ ಅಡಿಗೆ ನೌಕರರು ಭಾಗವಹಿಸಿದ್ದರು. ಗುಣಮಟ್ಟ ಇಲಾಖೆಯು ಹಣಕಾಸು ವರ್ಷ 2013-14 ನೇ ಸಾಲಿನಲ್ಲಿ ಇಂತಹುದೇ ವಿಷಯಗಳ ಕುರಿತಾಗಿ ತರಬೇತಿಯನ್ನು 15,000 ಮಾನವ ಗಂಟೆಗಳ ಕಾಲ ನಡೆಸಲು ಉದ್ದೇಶಿಸಿದೆ.