ಉತ್ತಮ ಆಡಳಿತದ ಕೀಲಿ ಕೈ ಆಂತರಿಕ ನಿಯಂತ್ರಣ ಎಂದು ನಾವು ನಂಬುತ್ತೇವೆ - ಆದ್ದರಿಂದ ಉನ್ನತ ಗುಣಮಟ್ಟದ ಪಾರದರ್ಶಕತೆಗಾಗಿ, ಕಟ್ಟುನಿಟ್ಟಾದ ಕ್ರಮಗಳನ್ನು ಅಳವಡಿಸಿಕೊಳ್ಳುತ್ತೇವೆ.
ಆಂತರಿಕ ನಿಯಂತ್ರಣಗಳ ಪಾರದರ್ಶಕತೆಯನ್ನು ಖಾತ್ರಿಗೊಳಿಸಲು, ಸಂಸ್ಥೆಯು ಹೆಸರಾಂತ ಚಾರ್ಟೆಡ್ ಅಕೌಂಟೆಂಟ್‌ಸಂಸ್ಥೆಗಳನ್ನು ಶಾಖೆಯ ಆಡಿಟರ್‌ಗಳಾಗಿ ನೇಮಕ ಮಾಡಿಕೊಂಡಿದೆ. ಶಾಖೆಯ ಆಡಿಟರ್‌ಗಳು ಆಯಾ ಶಾಖೆಯ ಆಡಿಟೆಡ್ ರಿಪೋರ್ಟ್ ಗಳನ್ನು ಒಂದು ನಿಯತಕಾಲಿಕ ಆಧಾರದ ಮೇಲೆ ಮ್ಯಾನೇಜ್ಮೆಂಟ್ ಗೆ ನೀಡುತ್ತಾರೆ. ನಂತರ ಈ ವರದಿಗಳನ್ನು ಸಂಸ್ಥೆಯ ಆಡಿಟ್ ಇಲಾಖೆಯ ಮೂಲಕ ಆಡಿಟ್ ಸಮಿತಿಯು ಪರಿಷ್ಕರಿಸುತ್ತದೆ.
ಆಡಿಟ್ ಸಮಿತಿಯು ಪರಿಣಾಮಕಾರಿಯಾದ ಆಂತರಿಕ ನಿಯಂತ್ರಣ ಪರಿಸರವನ್ನು ರಚಿಸಲು ಇರುವ ಟ್ರಸ್ಟಿಗಳ ಸಮಿತಿಯ ಒಂದು ಉಪ ಸಮಿತಿಯಾಗಿದೆ. ಆಡಿಟ್ ಸಮಿತಿಯು ಈ ಕೆಳಗಿನ ಟ್ರಸ್ಟಿಗಳನ್ನು ಹೊಂದಿದೆ:
ವಿ ಬಾಲಕೃಷ್ಣನ್ – ಅಧ್ಯಕ್ಷ
ರಾಮದಾಸ್ ಕಾಮತ್ - ಸದಸ್ಯ
ರಾಜ್ ಕೊಂಡೂರ್ – ಸದಸ್ಯ