ಎನ್ ಜಿ ಒ ಗಳ ಪಾತ್ರ

ಎನ್ ಜಿ ಒ ಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನ ಹಾಗೂ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಜ್ಯ ಸರ್ಕಾರಿ ಸಂಸ್ಥೆಗಳು ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳಿಗೆ ಆಹಾರ ತಲುಪುವ ಸಲುವಾಗಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು Akshaya Patra  ಫೌಂಡೇಶನ್ ಮುಂತಾದ  ಎನ್ ಜಿ ಒ  ಸಂಸ್ಥೆಗಳ ಜೊತೆ ಒಪ್ಪಂದವನ್ನು ಮಾಡಿಕೊಂಡಿರುತ್ತದೆ.  ಹೀಗಾಗಿ, ಅನೇಕ ಸಂಸ್ಥೆಗಳು ಹಸಿವು ಮತ್ತು ಅಪೌಷ್ಟಿಕತೆ ನಿವಾರಿಸಲು ಈ ಕಡೆಗೆ ಕೆಲಸ ಮಾಡುತ್ತದೆ.

ಈ ಖಾಸಗಿ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಕಾರ್ಯಕ್ರಮದ ಗುಣಮಟ್ಟ ಮತ್ತು ವಿಸ್ತರಣೆಯ ಸುಧಾರಣೆಗೆ ಒಂದು ಮುಖ್ಯ ಸಾಕ್ಷಿಯಾಗಿ ಸಾಬೀತಾಗಿದೆ. ಸರ್ಕಾರವು ಒಂದು ಲಾಭರಹಿತ ಸಂಸ್ಥೆ ಯನ್ನು ಪಾಲುದಾರನಾಗಿ ಆಯ್ಕೆ ಮಾಡುವಾಗ ಅನೇಕ ಅಂಶಗಳನ್ನು  ಪರಿಗಣಿಸುತ್ತದೆ. ಇಂತಹ ಸಂಸ್ಥೆಗಳು ಪಾರದರ್ಶಕತೆಯನ್ನು ಹೊಂದಿರಬೇಕು ಮತ್ತು ಅದರ  ' ಸಮಗ್ರತೆ ಸಾಬೀತಾಗಿರುಬೇಕು'. ಈ  ಕೆಳಗಿನವುಗಳು ಎನ್ ಜಿ ಒ  ಆಯ್ಕೆಯಲ್ಲಿ NP NSPE 2004 ಮಾನದಂಡಗಳಾಗಿದೆ:

ಧಾನ್ಯ ಕೊಡುಗೆಗಳಿಂದ ಬೇಯಿಸಿದ ಊಟದವರೆಗೆ

ಒಮ್ಮೆ ಆಯ್ಕೆ ಮಾಡಿದ ನಂತರ , NP-NSPE, 2004 ರ ಮಾರ್ಗದರ್ಶನಗಳ ಪ್ರಕಾರ, ಎನ್ ಜಿ ಒ  ಒಂದು ಅಡಿಗೆ ಮನೆಯನ್ನು , ಪ್ರತಿದಿನದ ಊಟವನ್ನು ತಯಾರಿಸಲು ಬೇಕಾದ ಕಾರ್ಯಾಚರಣೆಗಳನ್ನು ಸ್ಥಾಪಿಸಬೇಕು ಮತ್ತು ಅದನ್ನು ನೆಡೆಸಲು ಬೇಕಾದ ವೆಚ್ಚದ ಪಟ್ಟಿ ಯನ್ನು ಸಿದ್ಧಗೊಳಿಸಬೇಕು.

ನಗರ ಪ್ರದೇಶದಲ್ಲಿ  ವಿವಿಧ ಶಾಲೆಗಳ ಗುಂಪಿಗೆ, ಅಡುಗೆ ಮಾಡಲು ಸಾಧ್ಯವಾಗುವಂತಹ, ಸೂಕ್ತ ಪ್ರದೇಶದಲ್ಲಿ  ಕೇಂದ್ರೀಕೃತ ಅಡಿಗೆಕೋಣೆಗಳನ್ನು ಸ್ಥಾಪಿಸಲು ಅವಕಾಶವಿರುವ ಕಡೆ ಅಡುಗೆಮನೆಯನ್ನು ನಿರ್ಮಿಸಿ ಬೇಯಿಸಿದ ಬಿಸಿ ಊಟವನ್ನು ನೈರ್ಮಲ್ಯ ಸ್ಥಿತಿಗಳಲ್ಲಿ ಸೂಕ್ತ  ಮತ್ತು  ಒಂದು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯ ಮೂಲಕ ವಿವಿಧ ಶಾಲೆಗಳಿಗೆ ಸಾಗಿಸಬಹುದು. ನಗರ ಪ್ರದೇಶಗಳಲ್ಲಿ ತಾವು ಆಹಾರ ಒದಗಿಸುವ ಸಮೂಹಗಳ ಆಧಾರದ ಮೇಲೆ ಒಂದು ಅಥವಾ ಅದಕ್ಕಿಂತ ಹೆಚ್ಚು ಅಂತಹ ನೋಡಲ್ ಅಡಿಗೆ ಕೋಣೆಗಳು (ಗಳು) ಇರಬಹುದು.

ಈ ಯೋಜನೆಯನ್ನು  ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಸಲುವಾಗಿ, ಒಂದು ಎ ಜಿ ಒ ಕಾರ್ಯಕ್ರಮದ ನಿರ್ವಹಿಸಲು ಎಲ್ಲಾ ಉಪಕರಣಗಳ ಜೊತೆ ಸಜ್ಜುಗೊಂಡಿರಬೇಕು. ಒಂದು ಲಾಭರಹಿತ ಸಂಸ್ಥೆಯು ಅಗತ್ಯ ಪ್ರಮಾಣದಲ್ಲಿ ಮಧ್ಯಾಹ್ನದ ಬಿಸಿಯೂಟ  ಪೂರೈಕೆಗೆ ಬೇಕಾದ ಎಲ್ಲಾ  ಆರ್ಥಿಕ ಮತ್ತು ಉಪಕರಣಗಳ ವ್ಯವಸ್ಥಾಪನಾ ಸಾಮರ್ಥ್ಯ'ವನ್ನು ಹೊಂದಿರಬೇಕು.

ಸರ್ಕಾರವು ಇದನ್ನು ಹೇಗೆ ಸಾಧಿಸಬೇಕು ಎಂದು ಪರಿಹಾರವನ್ನು ಒದಗಿಸುತ್ತದೆ. ಮಾನವ ಸಂಪನ್ಮೂಲ ವಿಭಾಗದ ಸಚಿವಾಲಯ ಹೇಳುವ ಪ್ರಕಾರ:
   " ರಾಜ್ಯ ಸರಕಾರವು ಅರ್ಹ ಶಾಲೆಗಳಲ್ಲಿ  ಬೇಯಿಸಿದ ಊಟ ಅಥವಾ ಪೂರ್ವ ಬೇಯಿಸಿದ ಆಹಾರ ಎರಡನ್ನು ಎನ್ ಜಿ  ಒ ಗಳ ಬೆಂಬಲದಿಂದ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವ ಸಂಪೂರ್ಣ ಹೊಣೆ ಹೊತ್ತಿರುತ್ತದೆ. ಈ ಮಟ್ಟಿಗೆ ರಾಜ್ಯ ಸರ್ಕಾರದ ಅಥವಾ ಸಂಬಂಧಪಟ್ಟ ಎನ್ ಜಿ  ಒ ಆಹಾರ ಧಾನ್ಯಗಳನ್ನು ಬಿಸಿ ಊಟವಾಗಿ ತಯಾರಿಸಲು ಈ ಸಂಪನ್ಮೂಲಗಳನ್ನು ಸಜ್ಜುಗೊಳಿಸಬಹುದುದಾಗಿದೆ. "

                                                                                                            -    ಅನುಬಂಧ IX ಪ್ಯಾರಾ 7 ಮಾರ್ಗಸೂಚಿಗಳು

ಈ ಪರಿಹಾರವು, ಸುಮಾರು 80 ಮಿಲಿಯನ್ (8 ಕೋಟಿ) ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೃಹತ್ ಮೂಲಸೌಲಭ್ಯಗಳಿರುವ ಅಡುಗೆಕೋಣೆಗಳನ್ನು ದೇಶಾದ್ಯಂತ ಹೊಂದಿರುವ ಮತ್ತು ಸರಕಾರದ ಮಾರ್ಗಸೂಚಿಗಳ ಅನುಸಾರವಾಗಿ ಯೋಜನೆ ನಡೆಸುತ್ತಿರುವ Akshaya Patra ಸಂಸ್ಥೆಗಳಿಗೆ ಈ  ಅವಕಾಶವನ್ನು ಕಲ್ಪಿಸಿದೆ,  ಕಾರ್ಯಕ್ರಮದ ಅನುಷ್ಠಾನದ ಸಮಯದಲ್ಲಿ ಉಂಟಾದ ಕೊರತೆ ಹಣವನ್ನು ಸಂಗ್ರಹಿಸಲು ಇದು ಎನ್ ಜಿ ಒ ಗಳಿಗೆ ಒಂದು ಮೂಲವಾಗಿದೆ.

2008-2009 ನಿಮಿಷಗಳಂತೆ, ಕಾರ್ಯಕ್ರಮ ಅನುಮೋದನೆ ಮಂಡಳಿಯ ರಾಜ್ಯ ಸಭೆಯಲ್ಲಿ " ಅಡುಗೆಯವರು ಗೌರವಧನ, ಪಾತ್ರೆಗಳು ಮತ್ತು ಅಡಿಗೆಮನೆ ನಿರ್ಮಾಣ, ಸಾರಿಗೆ ಇತರ ವೆಚ್ಚಗಳನ್ನು ಎನ್ ಜಿ ಒ ನೀಡಬೇಕು."

ಸರ್ಕಾರ ನೀಡುವ ದೇಣಿಗೆಗೆ ಕೊಡ ನಿಬಂಧನೆಗಳನ್ನು ಮಾಡಿದೆ. ಉದಾಹರಣೆಗೆ 2003 ರಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಮಿತಿಯು (ಸಾಮಾಜಿಕ ಮತ್ತು ಆರ್ಥಿಕ ಯೋಗಕ್ಷೇಮಕ್ಕೆ, ಆದಾಯ ಇಲಾಖೆಯ ಪ್ರಚಾರ ರಾಷ್ಟ್ರೀಯ ಸಮಿತಿ, ಹಣಕಾಸು, ಭಾರತ ಸರ್ಕಾರದ ಸಚಿವಾಲಯ)  ರೂ 220 ಮಿಲಿಯನ್ (22 ಕೋಟಿ) ವರೆಗೆ ದೇಣಿಗೆಯನ್ನು ಪಡೆದು ಮತ್ತು 3 ವರ್ಷಗಳವರೆಗೆ ದಾನಿಗಳಿಗೆ 100% ತೆರಿಗೆ ಪ್ರಯೋಜನಗಳನ್ನು ಕೂಡ ನೀಡುತ್ತದೆ ಎಂದು ಈ ಯೋಜನೆ ಗೆ Akshaya Patra ಯನ್ನು ಶಿಫಾರಸು ಮಾಡಿತು.

2006 ರಲ್ಲಿ ಸಮಿತಿ ಮತ್ತೊಮ್ಮೆ Akshaya Patra’s ನ ಕಾರ್ಯಯೋಜನೆಯನ್ನು ಪರಿಶೀಲಿಸಿತು ಮತ್ತು ತೆರಿಗೆ ರಹಿತ ಉಚಿತ ದೇಣಿಗೆಗಳ  ಪ್ರಮಾಣವು  1,000 ಮಿಲಿಯನ್ (100 ಕೋಟಿ) ಗೆ ಬೆಳೆದಿರುವುದು ಕಂಡು ಬಂದಿತು. 2009 ರ ಮತ್ತೊಂದು ವಿಮರ್ಶೆಯಲ್ಲಿ  ರೂ 3 ವರ್ಷಗಳ ಅವಧಿಗೆ 2,000 ಮಿಲಿಯನ್ (200 ಕೋಟಿ)ಯಷ್ಟು ಹೆಚ್ಚಾಗಿರುವುದು ಕಂಡು ಬಂದಿತು..

ಎನ್ ಜಿ ಒ ಗಳನ್ನು ಪ್ರೋತ್ಸಾಹಿಸಲು ಸರ್ಕಾರ ನಿರ್ಧಾರ ಮಾಡಿರುವುದರಲ್ಲಿ ಎರಡು ದೀರ್ಘ ಕಾಲದ ತಂತ್ರ ಇದೆ. ಹಾಗೆ ಮಾಡುವುದರಿಂದ ಇದು ಕೇವಲ ಕಾರ್ಯಕ್ರಮದ ಗುಣಮಟ್ಟವನ್ನು ಸುಧಾರಿಸಲು ಮಾತ್ರವಲ್ಲದೆ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಕೂಡ ಸುಧಾರಿಸುತ್ತದೆ. NP-NSPE ಸೂಚನೆ, 2004 '  ರ ಪ್ರಕಾರ ಹಲವಾರು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ ಇದರಿಂದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಒಂದು ಜನರ ಯೋಜನೆಯಾಗಿ ಮಾರ್ಪಾಡಾಗುತ್ತದೆ.'

ಎನ್ ಜಿ ಒ ಗಳು  ಸಕ್ರಿಯವಾಗಿ  ಸ್ವಯಂ ಸೇವಕರಿಗೆ ಮತ್ತು ಬಂಡವಾಳ ಮೂಲಕ ಸಮುದಾಯ ಭಾಗವಹಿಸುವಿಕೆಯನ್ನು ಪ್ರಚಾರ ಮಾಡುತ್ತದೆ. ಅವರು ಸಮಾಜದ ಎಲ್ಲಾ ಪದರಗಳನ್ನು ಇದ್ದು ಮತ್ತು ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು 'ಜನರ' ಕಾರ್ಯಕ್ರಮವನ್ನಾಗಿಸಲು 'ಸಹಾಯ ಮಾಡುತ್ತಾರೆ.

ಪಾರದರ್ಶಕತೆಯನ್ನು ಇಟ್ಟುಕೊಳ್ಳುವುದು:

ಒಂದು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಕಾರ್ಯಾಚರಣೆಗಳ ಮೂಡುವ ಪ್ರಶ್ನೆ ಅಂದರೆ ಮಾಹಿತಿಯ ಪಾರದರ್ಶಕತೆ ಬಗ್ಗೆ. ರಾಷ್ಟ್ರೀಯ ಮಟ್ಟದ ಸ್ಟೀರಿಂಗ್ ಕಮ್ ಮಾನಿಟರಿಂಗ್ ಕಮಿಟಿ (NSMC) ಈ ಯೋಜನೆಯ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. NP-NSPE, 2004 ಹೇಳಿದಂತೆ, ಸಮಿತಿಯ ಈ ಕರ್ತವ್ಯಗಳು ಸೇರಿವೆ:

  • ಈ ಯೋಜನೆಗೆ ಸಮುದಾಯದ ಬೆಂಬಲ ಪಡೆಯುವುದು ಮತ್ತು ಖಾಸಗಿ ಸಾರ್ವಜನಿಕ ಸಹಭಾಗಿತ್ವದ ಪ್ರಚಾರ'

  • ಈ ಯೋಜನೆ ಅನುಷ್ಠಾನದ ಮೇಲ್ವಿಚಾರಣೆ , ಅದರ ಪರಿಣಾಮ ನಿರ್ಣಯಿಸುವುದು, ಮತ್ತು ಅದನ್ನ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವುದು'

ಅರ್ಹತೆ ಇರುವ ಒಂದು ಷರತ್ತು ಅಂದರೆ ಸಂಸ್ಥೆಯನ್ನು ವ್ಯವಹಾರಗಳನ್ನು ನಿರ್ವಹಿಸುವ ವ್ಯಕ್ತಿಗಳು  ಅಥವಾ ಸಾಬೀತಾಗಿರುವ ಸಮಗ್ರತೆಯ ವ್ಯಕ್ತಿಗಳು’ (ಸಮಾಜ ಮತ್ತು ಆರ್ಥಿಕ ಕಲ್ಯಾಣ ಪ್ರಚಾರ ರಾಷ್ಟ್ರೀಯ ಸಮಿತಿ, ಭಾರತ ಸರ್ಕಾರ).  ಮತ್ತೊಂದು ಅಂದರೆ ಸಾಮಾನ್ಯ ಖಾತೆಗಳ ಖರ್ಚುಮತ್ತು ವೆಚ್ಚ ರಸೀದಿಗಳನ್ನು ನಿರ್ವಹಿಸುವ ಸಂಸ್ಥೆ ಅಥವಾ ಸಂಘ '.  ವರದಿಗಳನ್ನು ಸ್ವಯಂಸೇವಾ ಸಂಸ್ಥೆಯಿಂದ ನಿಯಮಿತವಾಗಿ ಸಲ್ಲಿಸಬೇಕು.

ಫಲಿತಾಂಶಗಳು

ಮಧ್ಯಾಹ್ನದ ಬಿಸಿಯೂಟ ಯೋಜನೆ ಅನುಷ್ಠಾನದಲ್ಲಿ ಅನೇಕ ಖಾಸಗಿ ಘಟಕಗಳು ತೊಡಗಿಕೊಂಡರೆ ಒಂದು ಉತ್ತಮ ಪ್ರದರ್ಶನಕ್ಕೆ ಕಾರಣವಾಬಹುದು.

  • ಈ  ಯೋಜನೆಯಡಿಯಲ್ಲಿ ಸುಮಾರು 120 ಮಿಲಿಯನ್ ( 12 ಕೋಟಿ ) ಮಕ್ಕಳನ್ನು ಒಳಗೊಂಡಿದೆ, ಈ ಶಾಲೆಯ ಊಟ ಯೋಜನೆಯನ್ನು ವಿಶ್ವದ ಅತಿ ದೊಡ್ಡ ಯೋಜನೆಯಾಗಿಸಿದೆ. ಸರ್ಕಾರದ ಬಹುಮುಖ ವಿಧಾನಗಳಿಂದ ಮಹತ್ತರವಾದ ಫಲಿತಾಂಶವನ್ನು ತೋರಿಸಿದೆ.
  • ಅನನ್ಯ ಸಂಪನ್ಮೂಲಗಳಂತಹ Akshaya Patra ಸಂಸ್ಥೆಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಅವುಗಳನ್ನು ಯೋಜನೆಯ ಅನುಷ್ಠಾನದ ಹಸ್ತಗಳನ್ನಾಗಿಸಿ ಮತ್ತು ಸಾಧ್ಯವಾದಷ್ಟು ಸ್ವಾವಲಂಬಿಯನ್ನಾಗಿಸುವ ನಿಬಂಧನೆಗಳನ್ನುಮಾಡುವ ಮೂಲಕ, ಸರ್ಕಾರವು ಯಶಸ್ವಿಯಾಗಿ ನಮ್ಮ ದೇಶದ ಮಕ್ಕಳಿಗೆ ಸಹಾಯ ನೀಡುವಲ್ಲಿ ಇಡೀ ಸಮಾಜದ ಒಳಗೊಂಡಿರುವಂತೆ ಮಾಡಿದೆ. ಇದು ಸಮುದಾಯಗಳ  ಭಾಗವಹಿಸುವಿಕೆಯಿಂದ ಮತ್ತು  ಸ್ವಯಂ ಸೇವಕರಿಂದ  ಬರುವ ದೇಣಿಗೆ ಮೂಲಕ  ಈ ಯೋಜನೆಯನ್ನು ಪ್ರಚಾರಮಾಡುತ್ತದೆ.
  • ಖಾಸಗಿ ಸಾರ್ವಜನಿಕ ಪಾಲುದಾರಿಕೆಗಳು ಕಾರ್ಯಕ್ರಮದ ಯಶಸ್ಸಿಗೆ ಖಾತರಿಯಾಗುವುದಕ್ಕೆ ಕಾರಣವಾಗುತ್ತದೆ. ಈ ಸಂಸ್ಥೆಗಳ ನೆರವಿನೊಂದಿಗೆ ಸರ್ಕಾರ ಬೃಹತ್ ಪ್ರಮಾಣದ ಯೋಜನೆಯನ್ನು ಯಶಸ್ವಿಗೊಳಿಸಲು ಸಾಧ್ಯವಾಗಿದೆ.
  • ಅನೇಕ ರೀತಿಯಲ್ಲಿ ಈ ಯೋಜನೆಯು ಮಕ್ಕಳ ಮೇಲೆ ಪರಿಣಾಮವನ್ನು ಬೀರಿದೆ. ಅಟೆಂಡೆನ್ಸ್ ಹೆಚ್ಚಾಗಿದೆ , ತರಗತಿಯ ಹಸಿವು ಕಡಿಮೆಯಾಯಿತು, ಅಪೌಷ್ಟಿಕತೆ ಕಡಿಮೆಯಾಗಿದೆ ಮತ್ತು ಎಲ್ಲ ಜಾತಿಗಳ ಮಕ್ಕಳಲ್ಲಿ ಸಾಮಾಜಿಕ ಸುಧಾರಣೆಯಾಗಿದೆ.
  • ಜಾಗತಿಕ ಪ್ರಮಾಣದಲ್ಲಿ, ಭಾರತೀಯ ಸರ್ಕಾರ ಸಹಸ್ರಮಾನದ ಪ್ರಗತಿಯ ಗುರಿಗಳನ್ನು ಸಾಧಿಸಲು ಕೆಲಸವನ್ನು ಮಾಡಿದೆ.

The Best Way to Make a Difference in the Lives of Others