ಪರಿಣಾಮಗಳನ್ನು ತಿಳಿಯಲು

Akshaya Patra  ಫೌಂಡೇಶನ್ ನ ಹೇಳಿಕೆಯು ಸ್ಪಷ್ಟವಾಗಿ ಆಹಾರ ಮತ್ತು ಶಿಕ್ಷಣದ ನಡುವಿನ ಸಂಪರ್ಕವನ್ನು ಸೆಳೆಯುತ್ತದೆ. ಅದರ  ಕನಸಿನ ಮೊದಲ ಹೆಜ್ಜೆಯಾಗಿ ಈ ಫೌಂಡೇಶನ್ 2000 ರಲ್ಲಿ impact-of-the-akshaya-patra-foundationಶಾಲೆಗಳಲ್ಲಿ ಮಧ್ಯಾಹ್ನ ಊಟದ ಸೇವೆಯನ್ನು ಆರಂಭಿಸಿತು. ನಂತರ 2003 ರಲ್ಲಿ ಭಾರತ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಖಡ್ಡಾಯಗೊಳಿಸುವ ಆದೇಶ ಹೊರಡಿಸಿದ ಮೇಲೆ, Akshaya Patra ಸರ್ಕಾರಿ ಶಾಲೆಗಳಲ್ಲಿ ಬೇಯಿಸಿದ ಊಟವನ್ನು ಪೂರೈಸಲು ಸರ್ಕಾರದ ಜೊತೆ ಕೈ ಜೋಡಿಸಿತು. ತರಗತಿಯಲ್ಲಿನ ಹಸಿವನ್ನು ಹೋಗಲಾಡಿಸಲು ಸರಕಾರದ ಆಶ್ರಯದಲ್ಲಿ ಕೆಲಸ ಮಾಡುವುದು ಸಂಸ್ಥೆಗೆ ಸ್ವಾಗತಾರ್ಹ ಬೆಳವಣಿಗೆಯಾಯಿತು.

ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವಲ್ಲಿ Akshaya Patra ಈ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ಕೇಂದ್ರೀಯ ಬಿಸಿಯೂಟ ಯೋಜನೆಯನ್ನು  ಈ ಕೆಳಗಿನ ಆರು ಗುರಿಗಳನ್ನು ಪೂರೈಸುವುದರ ಮೂಲಕ ಯಶಸ್ವಿಯಾಗಿದೆ:

  • ತರಗತಿಯ ಹಸಿವು ಹೋಗಲಾಡಿಸುವುದು

  • ಶಾಲೆಯ ನೋಂದಣಿಯನ್ನು ಹೆಚ್ಚಿಸುವುದು

  • ಶಾಲೆಯ ಹಾಜರಾತಿ  ಹೆಚ್ಚಿಸುವುದು

  • ಜಾತಿಗಳ ಸಾಮಾಜಿಕ ಸುಧಾರಣೆ

  • ಅಪೌಷ್ಟಿಕತೆಯ ಬಗ್ಗೆ ಕಾಳಜಿ ಮತ್ತು

  • ಮಹಿಳಾ ಸಬಲೀಕರಣ

ಫೌಂಡೇಶನ್ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಆರು ಉದ್ದೇಶಗಳನ್ನು ಮತ್ತು ಅದರ ಪರಿಣಾಮ ಅಧ್ಯಯನಗಳನ್ನು ಎಷ್ಟರ ಮಟ್ಟಿಗೆ ಪೂರೈಸಿದೆ ಎಂದು ತಿಳಿಯಲು ವಿವಿಧ ಸಂಸ್ಥೆಗಳಿಂದ ಮೌಲ್ಯಮಾಪನವನ್ನು  ನಡೆಸಲಾಯಿತು. ಪರಿಣಾಮ ಅಧ್ಯಯನಗಳು ಈ ಕೆಳಗಿನಂತಿವೆ:

ಎ.ಸಿ.  ನೀಲ್ ಸನ್, ಅಧ್ಯಯನ

ಹಾರ್ವರ್ಡ್ ಕೇಸ್ ಅಧ್ಯಯನ

ಸರ್ಕಾರಿ ಅಧ್ಯಯನಗಳು

ಗವರ್ನೆನ್ಸ್ ನಾಲೆಡ್ಜ್ ಸೆಂಟರ್:
 
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ:
 
              - ರಾಜಸ್ಥಾನದಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಪರಿಸ್ಥಿತಿಯ ವಿಶ್ಲೇಷಣೆ
              - ಕರ್ನಾಟಕದ ಅಕ್ಷರ ದಾಸೋಹ ಯೋಜನೆಯ ವರದಿ

Share this post

Note : "This site is best viewed in IE 9 and above, Firefox and Chrome"

`